ಸಾಮೂಹಿಕ ಜಾಗೃತಿ ಕಾರ್ಯಕ್ರಮ ಚೈಲ್ಡ್‍ಲೈನ್ -1098

ಓಯಸಿಸ್ ಇಂಡಿಯಾ ಸಂಸ್ಥೆಯು ಸೊಸೈಟಿ ಕಾಯ್ದೆಯ ನೊಂದಾವಣಿಯಡಿಯಲ್ಲಿ ನೊಂದಾಯಿತ ಸಂಸ್ಥೆಯಾಗಿದ್ದು ಈ ಸಂಸ್ಥೆಯು ಮಕ್ಕಳಿಗೆ ಶಿಕ್ಷಣ, ಸಲಹೆ, ಮತ್ತು ವೃತ್ತಿತರಭೇತಿಗಾಗಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಬಾಲಕಾರ್ಮಿಕ, ಮಾನವಸಾಗಾಣಿಕೆ ತಡೆಗಟ್ಟುವಿಕೆ ಹಾಗೂ ವಿವಿಧ ಸಮಸ್ಯೆಗಳನ್ನು ತಡೆಗಟ್ಟುವ ಕುರಿತು ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳಿ ಬೈಕ್‍ರ್ಯಾಲಿ, ಬೀದಿನಾಟಕಗಳನ್ನು ನೆರವೇರಿಸುವ ಮೂಲಕ ಸಮುದಾಯದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಮಾಡುವುದು ಮುಖ್ಯ ಉದ್ಧೇಶವಾಗಿದೆ.

 

ಅದೇ ರೀತಿ ಮಂಗಳೂರಿಗೆ ಈ ತಂಡವು ದಿನಾಂಕ 30/10/2022 ರಂದು ಆಗಮಿಸುವುದರಿಂದ, ದ.ಕ.ಜಿಲ್ಲಾಆಡಳಿತ ಹಾಗೂ ವಿವಿಧ ಇಲಾಖೆಗಳ ಮತ್ತು ಚೈಲ್ಡ್‍ಲೈನ್, ಹಾಗು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೈಕ್ ರ್ಯಾಲಿ ಹಾಗೂ ಬೀದಿ ನಾಟಕಗಳನ್ನು ಮಾಡುವ ಮೂಲಕ ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತ ಕಾರ್ಯಕ್ರವನ್ನು ಮಾಡಿದ್ದಾರೆ.

 

Home | About | Sitemap | Contact

Copyright © 2013 - www.sswroshni.in. Powered by eCreators

Contact Us

School of Social Work
Roshni Nilaya, Mangalore- 575 002
Karnataka - India

Tel : 0824-2435791

E-Mail: [email protected]